ಎಸ್ಸೆಸ್ಸೆಫ್ ಉಳ್ಳಾಲ ಅಕ್ಕರೆಕೆರೆ ಶಾಖೆಯ ದ್ವಿ ವಾರ್ಷಿಕ ಮಹಾಸಭೆಯು ಶಾಖಾಧ್ಯಕ್ಷ ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ರವರ ಅಧ್ಯಕ್ಷತೆಯಲ್ಲಿ ಅಕ್ಕರೆಕೆರೆ ಸ್ಟೂಡೆಂಟ್ಸ್ ಹೌಸ್ ನಲ್ಲಿ ಇತ್ತೀಚೆಗೆ ನಡೆಯಿತು.ಎಸ್ ವೈ ಎಸ್ ಅಕ್ಕರೆಕೆರೆ ಬ್ರಾಂಚ್ ಅಧ್ಯಕ್ಷ ಉಸ್ಮಾನ್ ಸಖಾಫಿ ಪೊಳಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಎಸ್ಸೆಸ್ಸೆಫ್ ಅಕ್ಕರೆಕೆರೆ ಶಾಖೆಯು ಉತ್ತಮ ಕಾರ್ಯ ಚಟುವಟಿಕೆಗಳನ್ನು ಮಾಡುತ್ತಿದ್ದು,ಬೆಳೆದು ಬರುತ್ತಿರುವ ಎಳೆಯ ವಿದ್ಯಾರ್ಥಿಗಳನ್ನು, ಯುವಕರನ್ನು ನೈಜ ಸುನ್ನತ್ ಜಮಾಅತಿನ ಹಾದಿಯಲ್ಲಿ ಚಲಿಸುವಂತೆ ಮಾಡುವ ಸಲುವಾಗಿ ಎಸ್ಸೆಸ್ಸೆಫ್ ಎಂಬ ಅಜೇಯ ಸಂಘಟನೆಯಲ್ಲಿ ಸೇರಿಸಿ ಅವರನ್ನು ಎಸ್ಸೆಸ್ಸೆಫ್ಫಿನಲ್ಲಿ ಸಕ್ರಿಯರಾಗುವಂತೆ ಮಾಡುವ ಉತ್ತಮ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.ಎಸ್ ಎಸ್ ಎಫ್ ಅಕ್ಕರೆಕೆರೆ ಶಾಖೆಯ ಪ್ರ.ಕಾರ್ಯದರ್ಶಿ ಎಸ್.ಎಂ.ಶರೀಫ್ ದ್ವಿವಾರ್ಷಿಕ ವರದಿ ಮಂಡಿಸಿದರು.ಎಸ್ಸೆಸ್ಸೆಫ್ ಅಕ್ಕರೆಕೆರೆ ಶಾಖೆಯ ಕೋಶಾಧಿಕಾರಿ ಬಶೀರ್ ಸಖಾಫಿ ಉಳ್ಳಾಲ ದ್ವಿವಾರ್ಷಿಕ ಲೆಕ್ಕಪತ್ರ ಮಂಡಿಸಿದರು.ಬಳಿಕ ಪ್ರಸ್ತುತ ಸಭೆಯ ಅಧ್ಯಕ್ಷ ನವಾಝ್ ಸಖಾಫಿ ಉಳ್ಳಾಲ ಅಧ್ಯಕ್ಷತಾ ಭಾಷಣ ಮಾಡಿ ಎರಡು ವರ್ಷಗಳ ಅವಧಿಯಲ್ಲಿ ಸಂಘಟನಾ ಕಾರ್ಯಕ್ರಮಗಳು ಹಾಗು ರಿಲೀಫ್ ಸೇವೆಗಳು ನಡೆಸಲು ಸಹಾಯ ಸಹಕಾರವನ್ನು ನೀಡಿದ ಎಲ್ಲರಿಗೂ ಮತ್ತು ಜೊತೆಜೊತೆಯಾಗಿ ಎಸ್ಸೆಸ್ಸೆಫ್ಫಿನ ಸರ್ವ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ದುಡಿದ ಸಮಿತಿ ಸದಸ್ಯರಿಗೆ ಮತ್ತು ಸಹ ಕಾರ್ಯಕರ್ತರಿಗೆ ಪ್ರಾರ್ಥಿಸಿದರು.ಪ್ರಸ್ತುತ ಸಮಿತಿಯ ಅಧ್ಯಕ್ಷನಾದ ನಾನು ಮತ್ತು ಪ್ರಧಾನ ಕಾರ್ಯದರ್ಶಿ ಎಸ್ ಎಂ ಶರೀಫ್ ಹಾಗು ಕೋಶಾಧಿಕಾರಿ ಬಶೀರ್ ಸಖಾಫಿ ಸೇರಿ ಹಲವು ಕಾರ್ಯಕರ್ತರು ಎಸ್ಸೆಸ್ಸೆಫ್ಫಿನಲ್ಲಿ ದುಡಿಯುವ 35 ವರ್ಷದೊಳಗಿನ ಅವಧಿ ಮೀರಿ ಎಸ್ ವೈ ಎಸ್ ಪಾದಾರ್ಪಣೆ ಮಾಡುವ ವಯಸ್ಸು ಬಂದಿರುವುದರಿಂದ ಇಲ್ಲಿ ರಚನೆಯಾಗುವ ನೂತನ ಸಮಿತಿಯಲ್ಲಿ ನಾವಿರುವುದಿಲ್ಲ.ಇಂದು ರಚನೆಯಾಗುವ ನೂತನ ಸಮಿತಿಯು ಎಸ್ಸೆಸ್ಸೆಫ್ಫಿನಲ್ಲಿ ಸಕ್ರಿಯವಾಗಿ ದುಡಿಯಬೇಕೆಂದು ತಿಳಿಸಿ ನಾವು ಎಸ್ ವೈ ಎಸ್ಸಿನಲ್ಲಿ ಸೇರ್ಪಡೆಯಾಗುತ್ತೇವೆ.ನಮ್ಮ ಸಂಪೂರ್ಣ ಬೆಂಬಲ ಸಹಾಯ ಸಹಕಾರವಿದೆಯೆಂದು ಹೇಳಿದರು.ಬಳಿಕ ಚುನಾವಣಾ ವೀಕ್ಷಕರಾಗಿ ಆಗಮಿಸಿದ ಸಿರಾಜುದ್ದೀನ್ ರವರ ನೇತ್ರತ್ವದಲ್ಲಿ ನೂತನ ಸಮಿತಿಯ ಆಯ್ಕೆ ಪ್ರಕ್ರಿಯೆ ನಡೆಯಿತು.
ನೂತನಾಧ್ಯಕ್ಷರಾಗಿ ಸಿರಾಜುದ್ದೀನ್ ಅಕ್ಕರೆಕೆರೆ, ಉಪಾಧ್ಯಕ್ಷರುಗಳಾಗಿ ಶಾಹುಲ್ ಹಮೀದ್ ಉಸ್ತಾದ್ ಹಾಗು ಮನ್ಸೂರ್ ಅಕ್ಕರೆಕೆರೆ, ಪ್ರಧಾನ ಕಾರ್ಯದರ್ಶಿಯಾಗಿ ಆಸಿಫ್ ಅಕ್ಕರೆಕೆರೆ, ಜೊತೆ ಕಾರ್ಯದರ್ಶಿಗಳಾಗಿ ಮುಝಯ್ಯಿನ್ ಮತ್ತು ಮುಝಫ್ಫರ್, ಕ್ಯಾಂಪಸ್ ಕಾರ್ಯದರ್ಶಿಯಾಗಿ ಮಂಶೀದ್ ಅಕ್ಕರೆಕೆರೆ ಗುಡ್ಡೆ, ಕೋಶಾಧಿಕಾರಿಯಾಗಿ ಅಬ್ದುಲ್ ಮಜೀದ್ ಅಕ್ಕರೆಕೆರೆ ಹಾಗು ಹಂತೊಭತ್ತು ಮಂದಿಯನ್ನು ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.
ಬಳಿಕ ಉಳ್ಳಾಲ ಡಿವಿಷನ್ ನಾಯಕ ಮುಸ್ತಫ ಮಾಸ್ಟರ್ ಸಂಘಟನಾ ತರಗತಿ ನಡೆಸಿದರು. ಸೆಕ್ಟರ್ ಅಧ್ಯಕ್ಷ ಸಯ್ಯಿದ್ ಖುಬೈಬ್ ತಂಗಳ್, ಮಾಸ್ತಿಕಟ್ಟೆ ಆಜಾದ್ ನಗರ ಶಾಖಾಧ್ಯಕ್ಷ ಹಾಫಿಝ್ ಮುಈನ್ ಉಸ್ತಾದ್, ಸೆಕ್ಟರ್ ಉಪಾಧ್ಯಕ್ಷ ಮುಹಮ್ಮದ್ ಮದನಿ ಪ್ರಾಸ್ತಾವಿಕವಾಗಿ ಮಾತನಾಡಿದರು.ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸಿರಾಜುದ್ದೀನ್ ಕಾರ್ಯಕ್ರಮದ ಕೊನೆಗೆ ಮಾತನಾಡಿದರು.
ಪ್ರಸ್ತುತ ಸಭೆಯಲ್ಲಿ ಸೆಕ್ಟರ್ ಕಾರ್ಯದರ್ಶಿ ಮುಝಮ್ಮಿಲ್ ಕೋಟೆಪುರ, ಸೆಕ್ಟರ್ ಕೋಶಾಧಿಕಾರಿ ಇಲ್ಯಾಸ್ ಕೈಕೋ, ಎಸ್ ವೈ ಎಸ್ ಅಕ್ಕರೆಕೆರೆ ಬ್ರಾಂಚ್ ಕೋಶಾಧಿಕಾರಿ ಅಬ್ದುಲ್ಲತೀಫ್, ಎಸ್ಸೆಸ್ಸೆಫ್ ಮೇಲಂಗಡಿ ಶಾಖಾ ಜೊತೆ ಕಾರ್ಯದರ್ಶಿ ಶಫೀಖ್ ಮೇಲಂಗಡಿ ಉಪಸ್ಥಿತರಿದ್ದರು.ನೂತನ ಪ್ರ.ಕಾರ್ಯದರ್ಶಿ ಆಸಿಫ್ ಅಕ್ಕರೆಕೆರೆ ಧನ್ಯವಾದ ಮಾಡಿದರು.
Sunday, 1 January 2017
ಎಸ್ಸೆಸ್ಸೆಫ್ ಉಳ್ಳಾಲ ಅಕ್ಕರೆಕೆರೆ ಶಾಖಾ ಕೌನ್ಸಿಲ್ ಮೀಟ್ ಹಾಗು ನೂತನ ಸಮಿತಿ ಆಯ್ಕೆ ಕಾರ್ಯಕ್ರಮ
Subscribe to:
Post Comments (Atom)
No comments:
Post a Comment