Share To

Monday, 9 January 2017

ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ದ್ವಿ ವಾರ್ಷಿಕ ಮಹಾಸಭೆ.ನೂತನಾಧ್ಯಕ್ಷರಾಗಿ ಸಯ್ಯಿದ್ ಖುಬೈಬ್ ತಂಗಳ್ ಹಾಗು ಪ್ರಧಾನ ಕಾರ್ಯದರ್ಶಿಯಾಗಿ ಮುಝಮ್ಮಿಲ್ ಕೋಟೆಪುರ ಮರು ಆಯ್ಕೆ. ಕೋಶಾಧಿಕಾರಿಯಾಗಿ ಶಬೀರ್ ಪೇಟೆ, ಉಪಾಧ್ಯಕ್ಷರುಗಳಾಗಿ ಮುಹಮ್ಮದ್ ಮದನಿ ಹಳೆಕೋಟೆ ಹಾಗು ಮಿಕ್ದಾದ್ ಮುಕ್ಕಚ್ಚೇರಿ, ಜೊತೆ ಕಾರ್ಯದರ್ಶಿಗಳಾಗಿ ಹಫೀಝ್ ಬೊಟ್ಟು ಹಾಗು ಹನೀಫ್ ಬೊಟ್ಟು, ಕ್ಯಾಂಪಸ್ ಕಾರ್ಯದರ್ಶಿಯಾಗಿ ಮುಹಾಝ್ ಬಂಡಿಕೊಟ್ಯ ಆಯ್ಕೆ.

ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ದ್ವಿ ವಾರ್ಷಿಕ ಮಹಾ ಸಭೆ ಸಯ್ಯಿದ್ ಖುಬೈಬ್ ತಂಗಳ್ ರವರ ಅಧ್ಯಕ್ಷತೆಯಲ್ಲಿ ಉಳ್ಳಾಲ ಪೇಟೆ ಸಮುದಾಯ ಭವನ ಹಿದಾಯತ್ ವೇದಿಕೆಯಲ್ಲಿ ಜನವರಿ 08-2016 ರಂದು ನಡೆಯಿತು.ಎಸ್ ವೈ ಎಸ್ ಅಕ್ಕರೆಕೆರೆ ಬ್ರಾಂಚ್ ಅಧ್ಯಕ್ಷ ಉಸ್ಮಾನ್ ಸಖಾಫಿ ಪೊಳಲಿ ದುವಾ ನೆರವೇರಿಸಿದರು.ಎಸ್ ವೈ ಎಸ್ ಉಳ್ಳಾಲ ಸೆಂಟರ್ ಅಧ್ಯಕ್ಷರಾದ ಬಶೀರ್ ಅಹ್ಸನಿ ತೋಡಾರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಎಸ್ ವೈ ಎಸ್ ಮಂಜೇಶ್ವರ ಮಂಡಲ ಅಧ್ಯಕ್ಷರಾದ ಶರೀಫ್ ಸಅದಿ ಸಂಘಟನಾ ತರಗತಿ ನಡೆಸಿದರು. ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ವರದಿ ಮತ್ತು ಲೆಕ್ಕಪತ್ರ ಮುಝಮ್ಮಿಲ್ ಕೋಟೆಪುರ ಮಂಡಿಸಿದರು. ಕ್ಯಾಂಪಸ್ ವರದಿ ಮತ್ತು ಲೆಕ್ಕಪತ್ರವನ್ನು ನೌಫಲ್ ಕೋಟೆಪುರ ಮಂಡಿಸಿದರು. ಅಲ್ ಅಮೀನ್ ರಿಲೀಫ್ ಫೌಂಡೇಶನ್ ವರದಿ ಮತ್ತು ಲೆಕ್ಕಪತ್ರವನ್ನು ಅತೀಖ್ ಕೋಡಿ ಮಂಡಿಸಿದರು.ಬಳಿಕ ಹಾಲಿ ಸಮಿತಿಯನ್ನು ಬರ್ಖಾಸ್ತುಗೊಳಿಸಿ ಚುನಾವಣಾ ವೀಕ್ಷಕರಾಗಿ ಆಗಮಿಸಿದ್ದ ಡಿವಿಷನ್ ಪ್ರಧಾನ ಕಾರ್ಯದರ್ಶಿ  ಇಸ್ಮಾಯಿಲ್ ಮಾಸ್ಟರ್, ತಲಪಾಡಿ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಹಮೀದ್ ತಲಪಾಡಿ ಹಾಗು ಮೋಂಟುಗೋಳಿ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಪೊಟ್ಟೋಳಿಕೆ ರವರ ನೇತ್ರತ್ವದಲ್ಲಿ ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರಿಗೆ ನೂತನ ಪದಾಧಿಕಾರಿಗಳ ಆಯ್ಕೆ  ಪ್ರಕ್ರಿಯೆ ನಡೆಯಿತು.
ನೂತನಾಧ್ಯಕ್ಷರಾಗಿ ಸಯ್ಯಿದ್ ಖುಬೈಬ್ ತಂಗಳ್ ಹಾಗು ಪ್ರಧಾನ ಕಾರ್ಯದರ್ಶಿಯಾಗಿ ಮುಝಮ್ಮಿಲ್ ಕೋಟೆಪುರ ಮರು ಆಯ್ಕೆಯಾದರು. ಕೋಶಾಧಿಕಾರಿಯಾಗಿ ಶಬೀರ್ ಪೇಟೆ, ಉಪಾಧ್ಯಕ್ಷರುಗಳಾಗಿ ಮುಹಮ್ಮದ್ ಮದನಿ ಹಳೆಕೋಟೆ ಹಾಗು ಮಿಕ್ದಾದ್ ಮುಕ್ಕಚ್ಚೇರಿ, ಜೊತೆ ಕಾರ್ಯದರ್ಶಿಗಳಾಗಿ ಹಫೀಝ್ ಬೊಟ್ಟು ಹಾಗು ಹನೀಫ್ ಬೊಟ್ಟು, ಕ್ಯಾಂಪಸ್ ಕಾರ್ಯದರ್ಶಿಯಾಗಿ ಮುಹಾಝ್ ಬಂಡಿಕೊಟ್ಯ ಹಾಗು 28 ಮಂದಿಯನ್ನು ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಆರಿಸಲಾಯಿತು.ಬಳಿಕ ಇಸ್ಮಾಯಿಲ್ ಮಾಸ್ಟರ್ ಪ್ರತಿಜ್ಞಾ ವಿಧಿ ಬೋಧಿಸಿದರು.ನೂತನ ಸಮಿತಿ, ಕಾರ್ಯಕಾರಿ ಸಮಿತಿ ಸದಸ್ಯರು ಸೇರಿ ನೆರೆದ ಎಸ್ಸೆಸ್ಸೆಫ್ ಕಾರ್ಯಕರ್ತರು ಪ್ರತಿಜ್ಞಾ ವಿಧಿ ಸ್ವೀಕಾರ ಮಾಡಿದರು.
ಈ ಸಂದರ್ಭದಲ್ಲಿ ದ.ಕ ಜಿಲ್ಲಾ ವಕ್ಫ್ ಸಲಹಾ ಸಮಿತಿ ಸದಸ್ಯ ಬಿ.ಜಿ ಹನೀಫ್ ಹಾಜಿ, ಫಾರೂಖ್ ಹಿಬಃ, ಎಸ್ಸೆಸ್ಸೆಫ್ ಅಕ್ಕರೆಕೆರೆ ಮಾಜಿ ಕೋಶಾಧಿಕಾರಿ ಹಾಗು ಎಸ್ ವೈ ಎಸ್ ಮೇಲಂಗಡಿ ಬ್ರಾಂಚ್ ಸದಸ್ಯ ಬಶೀರ್ ಸಖಾಫಿ ಉಳ್ಳಾಲ, ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಮಾಜಿ ಉಪಾಧ್ಯಕ್ಷ ಹಾಗು ಎಸ್ ವೈ ಎಸ್ ಅಕ್ಕರೆಕೆರೆ ಬ್ರಾಂಚ್ ಸದಸ್ಯ ನವಾಝ್ ಸಖಾಫಿ ಉಳ್ಳಾಲ, ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಮಾಜಿ ಕೋಶಾಧಿಕಾರಿ ಹಾಗು ಎಸ್ ವೈ ಎಸ್ ಮುಕ್ಕಚ್ಚೇರಿ ಬ್ರಾಂಚ್ ಸದಸ್ಯ ಇಲ್ಯಾಸ್ ಕೈಕೋ, ತ್ವಾಹ ಕೋಟೆಪುರ, ಆಝಾದ್ ನಗರ ಶಾಖಾಧ್ಯಕ್ಷ ಹಾಫಿಝ್ ಮುಈನ್ ಉಸ್ತಾದ್, ಸಲೀಂ ಬೊಟ್ಟು, ಅಕ್ಬರ್ ಮೇಲಂಗಡಿ ಹಾಗು ಹಫೀಝ್ ಕೋಡಿ ಉಪಸ್ಥಿತರಿದ್ದರು.ಸೆಕ್ಟರ್ ಚುನಾವಣಾಧಿಕಾರಿ ಸಿರಾಜ್ ಸ್ವಾಗತಿಸಿ ಉಳ್ಳಾಲ ಡಿವಿಷನ್ ನಾಯಕ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಉಳ್ಳಾಲ ಧನ್ಯವಾದಗೈದರು. ಅನಸ್ ಝಿಯಾರತ್ ಟೂರ್ಸ್ ಮಾಲಕ ಹಾಗು ಎಸ್ಸೆಸ್ಸೆಫ್ ಮೇಲಂಗಡಿ ಶಾಖಾಧ್ಯಕ್ಷ ಅಬೂ ಅನಸ್ ಜಮಾಲ್ ಉಸ್ತಾದ್ ಕಾರ್ಯಕ್ರಮದ ಕೊನೆಗೆ ದುಆ ಮಾಡಿದರು.ಅಹ್ಸನ್ ಮುಕ್ಕಚ್ವೇರಿ ಕಾರ್ಯಕ್ರಮ ನಿರೂಪಿಸಿದರು.

No comments:

Post a Comment