Share To

Thursday, 5 January 2017

ಎಸ್ಸೆಸ್ಸೆಫ್ ಉಳ್ಳಾಲ ಕೋಡಿ ದೋಟ ಶಾಖೆಯ ದ್ವಿ ವಾರ್ಷಿಕ ಕೌನ್ಸಿಲ್...ನೂತನಾಧ್ಯಕ್ಷರಾಗಿ ಸದಾ ನಗು ಮುಖದ ಹಾಶಿರ್ ಆಯ್ಕೆ.

ಎಸ್ಸೆಸ್ಸೆಫ್ ಉಳ್ಳಾಲ ಕೋಡಿ ದೋಟ ಶಾಖಾ ದ್ವಿ ವಾರ್ಷಿಕ ಮಹಾಸಭೆಯು ಸೆಕ್ಟರ್ ಅಧ್ಯಕ್ಷ ಸಯ್ಯಿದ್ ಖುಬೈಬ್ ತಂಗಳ್ ರವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಎಸ್ಸೆಸ್ಸೆಫ್ ಕೋಡಿ ದೋಟ ಶಾಖಾ ಕಛೇರಿಯಲ್ಲಿ ನಡೆಯಿತು.
ಎಸ್ ವೈ ಎಸ್ ಮುಖಂಡ ಉಸ್ಮಾನ್ ಸಖಾಫಿ ಪೊಳಲಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಅತೀಖ್ ಕೋಡಿ ದ್ವಿ ವಾರ್ಷಿಕ ವರದಿ ವಾಚಿಸಿದರು.ಹಫೀಝ್ ಕೋಡಿ ಲೆಕ್ಕಪತ್ರ ಮಂಡಿಸಿದರು.ಅಶ್ರಫ್ ಸಖಾಫಿ ಕೂರ್ನಾಡ್ ಸಂಘಟನಾ ತರಗತಿ ನಡೆಸಿದರು.ಬಳಿಕ ಚುನಾವಣಾ ವೀಕ್ಷಕ ಸಿರಾಜುದ್ದೀನ್ ರವರ ನೇತ್ರತ್ವದಲ್ಲಿ ಎಸ್ಸೆಸ್ಸೆಫ್ ಕೋಡಿ ದೋಟ ಶಾಖೆಯ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು.
ನೂತನಾಧ್ಯಕ್ಷರಾಗಿ ಹಾಶಿರ್,ಪ್ರಧಾನ ಕಾರ್ಯದರ್ಶಿಯಾಗಿ ಹಫೀಝ್, ಕೋಶಾಧಿಕಾರಿಯಾಗಿ ಅತೀಖ್ ರವರನ್ನು ಆರಿಸಲಾಯಿತು.
ಪ್ರಸ್ತುತ ಕಾರ್ಯಕ್ರಮದಲ್ಲಿ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಮುಝಮ್ಮಿಲ್ ಕೋಟೆಪುರ,ರಶೀದ್ ಕೋಟೆಪುರ ಹಾಗು ಇನ್ನಿತರ ಎಸ್ಸೆಸ್ಸೆಫ್ ಕಾರ್ಯಕರ್ತರು ಉಪಸ್ಥಿತರಿದ್ದರು.ಅತೀಖ್ ಸ್ವಾಗತಿಸಿ ಹಫೀಜ್ ಧನ್ಯವಾದಗೈದರು.

No comments:

Post a Comment