Share To

Thursday, 5 January 2017

ಎಸ್ಸೆಸ್ಸೆಫ್ ಉಳ್ಳಾಲ ಪೇಟೆ ಶಾಖೆಯ ನೂತನಾಧ್ಯಕ್ಷರಾಗಿ ಶಬಂ ಆಯ್ಕೆ.

ಎಸ್ಸೆಸ್ಸೆಫ್ ಉಳ್ಳಾಲ ಪೇಟೆ ಶಾಖೆಯ ದ್ವಿ ವಾರ್ಷಿಕ ಮಹಾಸಬೆಯು ಸಯ್ಯಿದ್ ಖುಬೈಬ್ ತಂಗಳ್ ಅಧ್ಯಕ್ಷತೆಯಲ್ಲಿ ಫಾಶಿರ್ ನಿವಾಸದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉಸ್ಮಾನ್ ಸಖಾಫಿ ಉಳ್ಳಾಲ ಉದ್ಘಾಟಿಸಿದರು.ಸಯ್ಯಿದ್ ಖುಬೈಬ್ ತಂಗಳ್ ಸಂಘಟನಾ ಮಹತ್ವದ ಕುರಿತು ಮಾತನಾಡಿದರು.ಅಹ್ಸನ್ ಒಂಭತುಕೆರೆ ಹಾಗು ಸಿರಾಜ್ ಅಕ್ಕರೆಕೆರೆ ಚುನಾವಣಾ ವೀಕ್ಷಕರಾಗಿ ಆಗಮಿಸಿದ್ದರು.ಬಳಿಕ ಎಸ್ಸೆಸ್ಸೆಫ್ ಪೇಟೆ ಶಾಖೆಯ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು.
ಅಧ್ಯಕ್ಷರಾಗಿ ಶಬಂ, ಉಪಾಧ್ಯಕ್ಷರಾಗಿ ಹಿಲಾಲ್ ಹಾಗು ಅಶ್ಹದ್, ಪ್ರಧಾನ ಕಾರ್ಯದರ್ಶಿಯಾಗಿ ಫಾಶಿರ್, ಜೊತೆ ಕಾರ್ಯದರ್ಶಿಗಳಾಗಿ ಸಹದ್ ಹಾಗು ಹಿಶಾಂ, ಕೋಶಾಧಿಕಾರಿಯಾಗಿ ಶಬೀರ್, ಕ್ಯಾಂಪಸ್ ಕಾರ್ಯದರ್ಶಿಯಾಗಿ ಶಫೀಖ್ ಹಾಗು ಇಪ್ಪತ್ತೊಂದು ಮಂದಿಯನ್ನು ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಆರಿಸಲಾಯಿತು.
ಪ್ರಸ್ತುತ ಸಭೆಯಲ್ಲಿ ಸೆಕ್ಟರ್ ಪ್ರ.ಕಾರ್ಯದರ್ಶಿ ಮುಝಮ್ಮಿಲ್ ಕೋಟೆಪುರ,ಸೆಕ್ಟರ್ ಕೋಶಾಧಿಕಾರಿ ಇಲ್ಯಾಸ್ ಕೈಕೋ ಉಪಸ್ಥಿತರಿದ್ದರು.ಶಬೀರ್ ಸ್ವಾಗತಿಸಿ ಫಾಶಿರ್ ಧನ್ಯವಾದಗೈದರು

No comments:

Post a Comment