ಕೇರಳ"ಮಲಪ್ಪುರಂ ಜಿಲ್ಲಾ ಮುಸ್ಲಿಂ ಜಮಾಅತ್ ಅಧ್ಯಕ್ಷರೂ ಮರ್ಕಝ್ ಉಪಾಧ್ಯಕ್ಷರೂ ಪವಿತ್ರ ಕಾಬಾ ಶುದ್ದೀಕರಣ ಕಾರ್ಯಕ್ರಮದಲ್ಲೂ ಭಾಗವಹಿಸಿದ ಪ್ರಮುಖ ಸುನ್ನೀ ನಾಯಕ ಆಧ್ಯಾತ್ಮಿಕ ನೇತಾರ ಸಯ್ಯಿದ್ ಯೂಸುಫುಲ್ ಜೀಲಾನೀ ರವರ ನಿಧನವು ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ಗೌಸುಲ್ ಅಹ್ಳಮ್ ಅಶ್ಶೈಖ್ ಮುಹ್ಯುದ್ದೀನ್ ಶೈಖ್(ಖ.ಸಿ.) ರವರ ಪರಂಪರೆಗೆ ಸೇರಿದ ಕರವತ್ತಿ ಧ್ವೀಪದಲ್ಲಿ ಅಂತ್ಯ ವಿಶ್ರಮ ಹೊಂದಿರುವ ಅಸ್ಸಯ್ಯಿದ್ ಖಾಸಿಮ್ ವಲಿಯುಲ್ಲಾಹಿ (ಖ.ಸಿ.)ರವರ ಐದನೇ ಪೌತ್ರರಾದ ಯೂಸುಫುಲ್ ಜೀಲಾನಿ ಯವರ ವಿಯೋಗವು ಸುನ್ನಿಗಳಿಗೆ ತುಂಬಲಾಗದ ನಷ್ಟವಾಗಿದೆ. ಇವರ ವಿಯೂಗಕ್ಕೆ ಎಸ್ ವೈ ಎಸ್ ಉಳ್ಳಾಲ ಸೆಂಟರ್ ಅಧ್ಯಕ್ಷ ಬಶೀರ್ ಅಹ್ಸನಿ ತೋಡಾರ್, ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಅಧ್ಯಕ್ಷ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಉಳ್ಳಾಲ, ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಅಧ್ಯಕ್ಷ ಸಯ್ಯಿದ್ ಖುಬೈಬ್ ತಂಗಳ್, ಎಸ್ ವೈ ಎಸ್ ಅಕ್ಕರೆಕೆರೆ ಬ್ರಾಂಚ್ ಅಧ್ಯಕ್ಷ ಉಸ್ಮಾನ್ ಸಖಾಫಿ ಪೊಳಲಿ, ಸಯ್ಯಿದ್ ಮದನಿ ಸುನ್ನೀ ಸೆಂಟ್ರಲ್ ಕಮಿಟಿ ಅಧ್ಯಕ್ಷ ಅಬೂ ಅನಸ್ ಜಮಾಲ್ ಉಸ್ತಾದ್, ನವಾಝ್ ಸಖಾಫಿ ಉಳ್ಳಾಲ ಸೇರಿದಂತೆ ಎಸ್ ವೈ ಎಸ್ ಉಳ್ಳಾಲ ಸೆಂಟರ್ ಮತ್ತು ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಹಾಗು ಅದರ ಅಧೀನ ಬ್ರಾಂಚುಗಳ ಹಾಗು ಶಾಖೆಗಳ ನಾಯಕರು ಸಂತಾಪ ಸೂಚಿಸಿದ್ದಾರೆ.
No comments:
Post a Comment