Share To

Monday, 2 January 2017

ಎಸ್ಸೆಸ್ಸೆಫ್ ಉಳ್ಳಾಲ ಕೋಟೆಪುರ ಶಾಖೆ ದ್ವಿ ವಾರ್ಷಿಕ ಕೌನ್ಸಿಲ್ ಮೀಟ್

ಎಸ್ಸೆಸ್ಸೆಫ್ ಉಳ್ಳಾಲ ಕೋಟೆಪುರ ಶಾಖೆಯ ದ್ವಿ ವಾರ್ಷಿಕ ಕೌನ್ಸಿಲ್ ಮೀಟ್ ಕೋಟೆಪುರ ಶಾಖಾ ಕಛೇರಿಯಲ್ಲಿ ನಡೆಯಿತು.
ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಉಪಾಧ್ಯಕ್ಷ ಮುಹಮ್ಮದ್ ಮದನಿ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಅಧ್ಯಕ್ಷ ಸಯ್ಯಿದ್ ಖುಬೈಬ್ ತಂಗಳ್ ಪ್ರಾಸ್ತಾವಿಕವಾಗಿ ಮಾತನಾಡಿದರು.ಶರೀಫ್ ಸಅದಿ ಸುಂದರಭಾಗ್ ಸಂಘಟನಾ ತರಗತಿ ನಡೆಸಿದರು.ಮುಝಮ್ಮಿಲ್ ಉಸ್ತಾದ್ ಕೋಟೆಪುರ ದ್ವಿ ವಾರ್ಷಿಕ ವರದಿ ವಾಚಿಸಿದರು.ನೌಫಲ್ ಕೋಟೆಪುರ ದ್ವಿ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು.ಬಳಿಕ ಎಸ್ಸೆಸ್ಸೆಫ್ ಕೋಟೆಪುರ ಶಾಖೆಯ ನೂತನ ಸಮಿತಿಗೆ ಆಯ್ಕೆ ಪ್ರಕ್ರಿಯೆ ನಡೆಯಿತು.
ನೂತನಾಧ್ಯಕ್ಷರಾಗಿ ಮುಝಮ್ಮಿಲ್ ಉಸ್ತಾದ್ ಕೋಟೆಪುರ, ಉಪಾಧ್ಯಕ್ಷರಾಗಿ ಇರ್ಫಾನ್ ಹಾಗು ಅಹ್ಮದ್ ಫೈಝಲ್, ಪ್ರಧಾನ ಕಾರ್ಯದರ್ಶಿಯಾಗಿ ನೌಫಲ್ ಕೋಟೆಪುರ, ಜೊತೆಕಾರ್ಯದರ್ಶಿಗಳಾಗಿ ಸಾಹಿಲ್ ಹಾಗು ಸಅದುದ್ದೀನ್, ಕೋಶಾಧಿಕಾರಿಯಾಗಿ ಯಾಸಿರ್, ಕ್ಯಾಂಪಸ್ ಕಾರ್ಯದರ್ಶಿಯಾಗಿ ಫೈಝಲ್,ಕಛೇರಿ ಸಂಚಾಲಕರಾಗಿ ಇಜಾಝ್ ಹಾಗು ಹದಿನೇಳು ಮಂದಿ ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.
ಅಹ್ಸನ್ ಚುನಾವಣಾ ವೀಕ್ಷಕರಾಗಿ ಆಗಮಿಸಿದ್ದರು.ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಮುಝಮ್ಮಿಲ್ ಕೋಟೆಪುರ,ಇರ್ಫಾನ್ ಹಾಗು ಇನ್ನಿತರ ಎಸ್ಸೆಸ್ಸೆಫ್ ಕಾರ್ಯಕರ್ತರು ಉಪಸ್ಥಿತರಿದ್ದರು.ಮುಝಮ್ಮಿಲ್ ಉಸ್ತಾದ್ ಸ್ವಾಗತಿಸಿ ನೌಫಲ್ ಕೋಟೆಪುರ ಧನ್ಯವಾದಗೈದರು.

No comments:

Post a Comment