ಎಸ್ಸೆಸ್ಸೆಫ್ ಅಕ್ಕರೆಕೆರೆ ಯೂನಿಟ್ ಸಮ್ಮೇಳನ
ಉಳ್ಳಾಲ ಅಕ್ಕರೆಕೆರೆ : ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಷನ್ ರಾಜ್ಯಾದ್ಯಂತ ಯೂನಿಟ್ ಸಮ್ಮೇಳನಗಳು ಹಾಗು ಸದಸ್ಯತನ ಅಭಿಯಾನ ಹಮ್ಮಿಕೊಂಡಿದ್ದು, ಇದರ ಭಾಗವಾಗಿ ಎಸ್ಸೆಸ್ಸೆಫ್ ಅಕ್ಕರೆಕೆರೆ ಶಾಖೆಯ ವತಿಯಿಂದ ಯೌವ್ವನ ಮರೆಯಾಗುವ ಮುನ್ನ ಎಂಬ ಶೀರ್ಷಿಕೆಯಡಿ ಯುನಿಟ್ ಸಮ್ಮೇಳನ ಹಾಗು ಸದಸ್ಯತನ ಅಭಿಯಾನ ನಡೆಯಿತು.
ಎಸ್ಸೆಸ್ಸೆಫ್ ಅಕ್ಕರೆಕೆರೆ ಶಾಖಾ ನಿರ್ದೇಶಕರಾದ ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಧ್ಯಕ್ಷತೆ ವಹಿಸಿದರು. ಎಸ್ ವೈ ಎಸ್ ಉಳ್ಳಾಲ ಸೆಂಟರ್ ಪ್ರಧಾನ ಕಾರ್ಯದರ್ಶಿ ಬಶೀರ್ ಸಖಾಫಿ ಉಳ್ಳಾಲ ಕಾರ್ಯಕ್ರಮ ಉದ್ಘಾಟಿಸಿದರು. ಡಿವಿಷನ್ ಅಧ್ಯಕ್ಷರಾದ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಉಳ್ಳಾಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಾಫಿಝ್ ಉವೈಸ್ ಕೋಟೆಪುರ ಮುಖ್ಯ ಪ್ರಭಾಷಣ ನಡೆಸಿದರು. ದ.ಕ ಜಿಲ್ಲಾ ನಾಯಕ ಸಯ್ಯಿದ್ ಖುಬೈಬ್ ತಂಗಲ್ ಹಾಗು ಉಳ್ಳಾಲ ಸೆಕ್ಟರ್ ಅಧ್ಯಕ್ಷರಾದ ಮುಸ್ತಫ ಮಾಸ್ಟರ್ ಎಸ್ಸೆಸ್ಸೆಫ್ ಸದಸ್ಯತನ ಅಭಿಯಾನದ ಬಗ್ಗೆ ಮಾಹಿತಿ ನೀಡಿದರು. ಎಸ್ಸೆಸ್ಸೆಫ್ ಅಕ್ಕರೆಕೆರೆ ಶಾಖೆಯ ಪ್ರಥಮ ಸದಸ್ಯತನವನ್ನು ದ.ಕ ಜಿಲ್ಲಾ ನಾಯಕರಾದ ಅಲ್ ಹಾಜ್ ಸಯ್ಯಿದ್ ಖುಬೈಬ್ ತಂಗಲ್ ಪಡೆದರು.
ಈ ಸಂದರ್ಭದಲ್ಲಿ ಸೆಕ್ಟರ್ ಜತೆ ಕಾರ್ಯದರ್ಶಿ ಮುಝಮ್ಮಿಲ್ ಮದನಿ, ಆಝಾದ್ ನಗರ ಶಾಖಾಧ್ಯಕ್ಷ ಹಾಫಿಝ್ ಮುಈನ್ ರಝಾ ಅಲ್ ಅಮ್ಜದಿ, ಅಕ್ಕರೆಕೆರೆ ಶಾಖಾ ಪ್ರಧಾನ ಕಾರ್ಯದರ್ಶಿ ಜಿಶಾನ್, ಎಸ್ ವೈ ಎಸ್ ಅಕ್ಕರೆಕೆರೆ ಬ್ರಾಂಚ್ ನಾಯಕ ಅಲ್ ಹಾಜ್ ಅಬ್ದುಲ್ಲತೀಫ್ ಉಪಸ್ಥಿತರಿದ್ದರು. ಶಾಖಾ ನಾಯಕ ಸಿರಾಜುದ್ದೀನ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
No comments:
Post a Comment