ಉಳ್ಳಾಲದಲ್ಲಿ ಹೊಸ ಚರಿತ್ರೆ ನಿರ್ಮಿಸಿದ ಇಲಲ್ ಹಬೀಬ್ ಮೀಲಾದ್ ಬೈಕ್ ರ್ಯಾಲಿ..!!
ಜಗವನ್ನೇ ಜಗಜಗಿಸುತ್ತಾ ಜನ್ಮ ತಾಳಿದ ಜಗತ್ತು ಕಂಡ ಅತೀ ಶ್ರೇಷ್ಠ ವಿಶ್ವ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ರವರ 1491 ನೇ ಜನ್ಮ ತಿಂಗಳ ಅಂಗವಾಗಿ ಎಸ್ಸೆಸ್ಸೆಫ್ ಉಳ್ಳಾಲ ಹಾಗು ತೊಕ್ಕೋಟು ಸೆಕ್ಟರ್, ಎಸ್ ವೈ ಎಸ್ ಉಳ್ಳಾಲ ಸೆಂಟರ್ ಮತ್ತು ಸಯ್ಯಿದ್ ಮದನಿ ಸುನ್ನೀ ಸೆಂಟ್ರಲ್ ಕಮಿಟಿ ಉಳ್ಳಾಲ ಹಮ್ಮಿಕೊಂಡ ಐತಿಹಾಸಿಕವಾದ ಇಲಲ್ ಹಬೀಬ್ ಮೀಲಾದ್ ಬೈಕ್ ರ್ಯಾಲಿ ಸಯ್ಯಿದ್ ಮದನಿ ಖ.ಸಿ ರವರ ನಾಮದಿಂದ ಫುನೀತಗೊಂಡ ಧನ್ಯಭೂಮಿ ಮದನಿನಗರ ದಿಂದ ಪ್ರಾರಂಭಗೊಂಡು ಉಳ್ಳಾಲದ ರಾಜಬೀದಿಗಳಲ್ಲಿ ಸಂಚರಿಸಿ ಸಾವಿರ ಸಾವಿರ ಸ್ವಲಾತ್ ಆ ಮುತ್ತು ಹಬೀಬ್ ಸ.ಅ ರವರ ಸನ್ನಿಧಿಗೆ ಸಮರ್ಪಿಸುತ್ತಾ ಉಳ್ಳಾಲ ಪೇಟೆ ಪುರಸಭೆ ಮೈದಾನದಲ್ಲಿ ಸಮಾಪ್ತಿಗೊಂಡಿತು.ಆ ಪುಣ್ಯ ನಿಮಿಷಗಳಲ್ಲಿ ಸಹಸ್ರಾರು ಪ್ರವಾದಿ ಪ್ರೇಮಿಗಳು ಭಾಗಿಯಾಗಿ ಉಳ್ಳಾಲದ ಚರಿತ್ರೆಯಲ್ಲಿಯೇ ಹೊಸ ಇತಿಹಾಸವನ್ನು ನಿರ್ಮಿಸಿತು.
ಇಸ್ಲಾಮಿನ ಪ್ರಭೆಯನ್ನು ಹರಡಿ ಅಂಧಕಾರ, ಅನಾಚಾರ, ಅಧರ್ಮಗಳಲ್ಲಿ ಮುಳುಗಿದ್ದ ಜನತೆಗೆ ನೈತಿಕತೆಯ ಬೋಧನೆಯನ್ನು ನೀಡಿ ಮಾನವೀಯ ಸಂದೇಶವನ್ನು ಬಿತ್ತರಿಸಿ ಅವರನ್ನು ಧಾರ್ಮಿಕತೆಯ ವಕ್ತಾರರನ್ನಾಗಿಸಿದ ಸಯ್ಯಿದ್ ಮದನಿ ಖ.ಸಿ ರವರ ಮುಖಾಂತರ ಧನ್ಯಗೊಂಡ ಊರಾಗಿದೆ ಉಳ್ಳಾಲ.
ಅಹ್ಲುಸ್ಸುನ್ನತಿ ವಲ್ ಜಮಾಅತಿನ ಆದರ್ಶ ನಾಯಕರಾಗಿ ಮುಸ್ಲಿಂ ಸಮೂಹಕ್ಕೆ ಇಸ್ಲಾಮಿನ ನೈಜ ಸುನ್ನೀ ಆಶಯಾದರ್ಶಗಳನ್ನು ತಿಳಿಸಿಕೊಟ್ಟು ಎಲ್ಲಾ ತರದ ನೂತನವಾದಿಗಳ ನೀಚ ಕುಟಿಲ ತಂತ್ರಗಳ ಕಪಿಮುಷ್ಟಿಯಿಂದ ಮುಸ್ಲಿಂ ಸಮೂಹವನ್ನು ಸಡಿಲಿಸಿ ಅವರಿಗೆ ಸುನ್ನತ್ ಜಮಾಅತಿನ ನೈಜ ವಿಶ್ವಾಸಾಚಾರಗಳನ್ನು ತಿಳಿಸಿ ಇಸ್ಲಾಮನ್ನು ಭದ್ರಗೊಳಿಸಿದ ತಾಜುಲ್ ಉಲಮಾ ಖ.ಸಿ ರವರಿಂದ ಫುನೀತಗೊಂಡ ನಾಡಾಗಿದೆ ಉಳ್ಳಾಲ.
ಹೌದು
ಧಾರ್ಮಿಕ ವಿಷಯದಲ್ಲಿ ತಾಜುಲ್ ಉಲಮಾ ಖ.ಸಿ ಯಾವುದೇ ಆಕ್ಷೇಪ,ಆರೋಪಗಳಿಗೆ ಎದೆಗುಂದಲಿಲ್ಲ.ತಾಜುಲ್ ಉಲಮಾ ಹೇಳಿದಂತಹ ಮಾತು*
*أنا على الحق ولو كنت وحدي*
ನಾನು ಸತ್ಯದ ಹಾದಿಯಲ್ಲಿದ್ದೇನೆ.ನಾನು ಏಕಾಂಗಿಯಾದರೂ ಸರಿ,ಇಸ್ಲಾಮಿನ, ಸುನ್ನತ್ ಜಮಾಅತಿನ ವಿಷಯದಲ್ಲಿ ಕಿಂಚಿತ್ತೂ ಸಡಿಲ ಮನೋಭಾವ ನನಗಿಲ್ಲ.
ಇಂತಹ ಸುನ್ನೀ ಸಮೂಹದ ಅತ್ಯಂತ ಶ್ರೇಷ್ಠ ನಾಯಕ ತಾಜುಲ್ ಉಲಮಾ ಖ.ಸಿ ರವರಿಂದ ಪಳಗಿದ ಮಕ್ಕಳು ನಾವು.
ಎಲ್ಲಾ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಮುತ್ತು ಹಬೀಬ್ ಸ.ಅ ರವರ ಮೇಲಿನ ಪ್ರೇಮವನ್ನು ತೋರ್ಪಡಿಸಿ ಆ ಮೂಲಕ ತಾಜುಲ್ ಉಲಮಾ ಖ.ಸಿ ನಮಗೆ ತೋರಿಸಿಕೊಟ್ಟ ಹಾದಿಯಲ್ಲಿ ಚಲಿಸುವವರಾಗಿ ಸುನ್ನತ್ ಜಮಾಅತಿನ ಆಶಯಾದರ್ಶವನ್ನು ಎತ್ತಿ ತೋರಿಸಿ ಬೈಕ್ ಜಾಥಾದ ಆ ಪುಣ್ಯ ನಿಮಿಷಗಳಲ್ಲಿ ಭಾಗವಹಿಸಿದರು.
ಮದನಿ ನಗರ ಜುಮಾ ಮಸೀದಿಯಲ್ಲಿ ಅಸರ್ ನಮಾಜು ನಿರ್ವಹಿಸಿ ಮದನಿ ನಗರದ ದಫನ ಭೂಮಿಯಲ್ಲಿ ಅಂತ್ಯ ವಿಶ್ರಮ ಹೊಂದಿರುವ ಉಳ್ಳಾಲ ಸಯ್ಯಿದ್ ಮದನಿ ಅರೆಬಿಕ್ ಶರೀಅತ್ ಕಾಲೇಜು ಇದರ ಪ್ರೊಫೆಸರ್ ಆಗಿದ್ದ ಮರ್ಹೂಂ ಬೈತಾರ್ ಉಸ್ತಾದರ ಮಖ್ಬರ ಝಿಯಾರತ್ ಮೂಲಕ ಮದನಿ ನಗರ ಜುಮಾ ಮಸೀದಿ ವಠಾರದಿಂದ ಆರಂಭಗೊಂಡ ಬೈಕ್ ರ್ಯಾಲಿಯು ಎಸ್ ವೈ ಎಸ್ ಉಳ್ಳಾಲ ಸೆಂಟರ್ ಅಧ್ಯಕ್ಷ ಬಶೀರ್ ಅಹ್ಸನಿ ಉಸ್ತಾದ್,ಸಯ್ಯಿದ್ ಮದನಿ ಸುನ್ನೀ ಸೆಂಟ್ರಲ್ ಕಮಿಟಿ ಉಳ್ಳಾಲ ಇದರ ಅಧ್ಯಕ್ಷ ಜಮಾಲ್ ಉಸ್ತಾದ್,ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಅಧ್ಯಕ್ಷ ಸಯ್ಯಿದ್ ಖುಬೈಬ್ ತಂಗಳ್,ತೊಕ್ಕೋಟು ಸೆಕ್ಟರ್ ಅಧ್ಯಕ್ಷ ಇಲ್ಯಾಸ್ ಸಖಾಫಿ ಹಾಗು ಸಯ್ಯಿದ್ ಜಲಾಲ್ ತಂಗಳ್ ಅಳೇಕಲ ಇವರ ನೇತ್ರತ್ವದಲ್ಲಿ ಚೊಂಬುಗುಡ್ಡೆ, ತೊಕ್ಕೋಟು, ಮಾಸ್ತಿಕಟ್ಟೆ ಮಾರ್ಗವಾಗಿ ಉಳ್ಳಾಲ ಪೇಟೆ ಪುರಸಭೆ ಮೈದಾನದಲ್ಲಿ ಸಮಾಪ್ತಿಗೊಂಡಿತು.ಬಳಿಕ ನಡೆದ ಬೈಕ್ ಜಾಥಾ ಸಮಾರೋಪ ಸಮಾರಂಭವನ್ನು ಇಲ್ಯಾಸ್ ಸಖಾಫಿ ಉದ್ಘಾಟಿಸಿದರು.ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ನಾಯಕ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಉಳ್ಳಾಲ ಪ್ರಾಸ್ತಾವಿಕ ವಾಗಿ ಮಾತನಾಡಿದರು.ಎಸ್ಸೆಸ್ಸೆಫ್ ಹಾವೇರಿ ಜಿಲ್ಲಾಧ್ಯಕ್ಷ ಮುಸ್ತಫ ನಯೀಮಿ ಹಾವೇರಿ ಮೀಲಾದ್ ಸಂದೇಶ ಭಾಷಣ ಮಾಡಿದರು.
ಮಗ್ರಿಬ್ ನಮಾಜಿನ ನಂತರ ಪುರಸಭೆ ಸಮುದಾಯ ಭವನದಲ್ಲಿ ಬ್ರಹತ್ ಮೌಲಿದ್ ಮಜ್ಲಿಸ್ ಕಾರ್ಯಕ್ರಮ ನಡೆಯಿತು.
ಪ್ರಸ್ತುತ ಈ ಎಲ್ಲಾ ಕಾರ್ಯಕ್ರಮಗಳಲ್ಲಿ ದ.ಕ ಜಿಲ್ಲಾ ಕೋಶಾಧಿಕಾರಿ ಅಲ್ತಾಫ್ ಕುಂಪಲ, ದ.ಕ ಜಿಲ್ಲಾ ವಕ್ಫ್ ಸಲಹಾ ಸಮಿತಿ ಸದಸ್ಯ ಹನೀಫ್ ಹಾಜಿ,ಉಳ್ಳಾಲ ಸೆಕ್ಟರ್ ಪ್ರ.ಕಾರ್ಯದರ್ಶಿ ಮುಝಮ್ಮಿಲ್ ಕೋಟೆಪುರ,ಸಯ್ಯಿದ್ ಮದನಿ ಸುನ್ನೀ ಸೆಂಟ್ರಲ್ ಕಮಿಟಿ ಪ್ರ.ಕಾರ್ಯದರ್ಶಿ ಅಶ್ರಫ್ ಹಾಜಿ ಉಳ್ಳಾಲ,ಎಸ್ ವೈ ಎಸ್ ಉಳ್ಳಾಲ ಸೆಂಟರ್ ಪ್ರ.ಕಾರ್ಯದರ್ಶಿ ತ್ವಾಹಿರ್ ಹಾಜಿ,ತೊಕ್ಕೋಟು ಸೆಕ್ಟರ್ ಪ್ರ.ಕಾರ್ಯದರ್ಶಿ ಜಾಫರ್ ಅಳೇಕಲ,ಉಳ್ಳಾಲ ಸೆಕ್ಟರ್ ಉಪಾಧ್ಯಕ್ಷ ಮುಹಮ್ಮದ್ ಮದನಿ ಹಾಗು ನವಾಝ್ ಸಖಾಫಿ ಉಳ್ಳಾಲ,ಉಳ್ಳಾಲ ಸೆಕ್ಟರ್ ಕೋಶಾಧಿಕಾರಿ ಇಲ್ಯಾಸ್ ಕೈಕೋ ಹಾಗು ಇನ್ನಿತರ ಹಲವು ಉಲಮಾ ಉಮರಾ ಗಣ್ಯರು ಉಪಸ್ಥಿತರಿದ್ದರು.
Masha Allah
ReplyDeleteMasha Allah
ReplyDeleteಮಾಷಾ ಅಲ್ಲಾಹ್ ಅಲ್ಲಾಹು ಸ್ವೀಕರಿಸಲಿ.... :)
ReplyDeleteಕೊನೆ ಉಸಿರಿರುವವರೆಗೂ ಸುನ್ನತ್ ಜಮಾಅತಿನ ಸುಂದರ ಹಾದಿಯಲ್ಲಿ ಜೀವಿಸಿ ಮರಣಹೊಂದಲು ನಮ್ಮೆಲ್ಲರಿಗೂ ಆ ಜಗದೊಡೆಯನು ಭಾಗ್ಯ ನೀಡಲಿ ಆಮೀನ್