ಎಸ್ ವೈ ಎಸ್ ಮುಕ್ಕಚ್ಚೇರಿ ಬ್ರಾಂಚ್ ಹಾಗು ಎಸ್ಸೆಸ್ಸೆಫ್ ಮುಕ್ಕಚ್ಚೇರಿ ಶಾಖಾ ಆಶ್ರಯದಲ್ಲಿ ತಾಜುಲ್ ಉಲಮಾ ಸ್ಟಡೀ ಮತ್ತು ರಿಸರ್ಚ್ ಸೆಂಟರ್ ಕಟ್ಟಡ ಉದ್ಘಾಟನಾ ಸಮಾರಂಭ ಹಾಗು ಮೆಹಪಿಲೇ ತ್ವಯ್ಬಃ ದ್ಸಿಕ್ರ್ ಮಜ್ಲಿಸ್ ಚಾಲನಾ ಸಂಗಮ ಮುಕ್ಕಚ್ಚೇರಿಯಲ್ಲಿ ನಡೆಯಿತು.
ದ.ಕ ಜಿಲ್ಲಾ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ತೋಕೆ ಕಾಮಿಲ್ ಸಖಾಫಿ ಹಾಗು ಸಯ್ಯಿದ್ ಮದನಿ ಮೊಹಲ್ಲಾ ಒಕ್ಕೂಟ ಇದರ ಅಧ್ಯಕ್ಷರಾಗಿರುವ PSM ಶಿಹಾಬುದ್ದೀನ್ ಸಖಾಫಿ ಉಳ್ಳಾಲ ಮಾತನಾಡಿದರು. ಎಸ್ ವೈ ಎಸ್ ಉಳ್ಳಾಲ ಸೆಂಟರ್ ಅಧ್ಯಕ್ಷರಾದ ಸಯ್ಯಿದ್ ಜಲಾಲ್ ತಂಗಳ್ ಅಧ್ಯಕ್ಷತೆ ವಹಿಸಿದರು. ಈ ಸಂದರ್ಭದಲ್ಲಿ ಸುನ್ನತ್ ಜಮಾಅತಿನ ಏಳಿಗೆಗಾಗಿ ಅಪಾರ ಸೇವೆ ಸಲ್ಲಿಸಿದ SYS ಉಳ್ಳಾಲ ಸೆಂಟರ್ ಉಪಾಧ್ಯಕ್ಷರಾದ ಹೈದರ್ ಮುಕ್ಕಚ್ಚೇರಿ ಹಾಗು ಎಸ್ಸೆಸ್ಸೆಫ್ ಮುಕ್ಕಚ್ಚೇರಿ ಶಾಖಾ ಕಾರ್ಯದರ್ಶಿ ಅಝೀಮ್ ಇವರನ್ನು ಸನ್ಮಾನಿಸಲಾಯಿತು.
ಪ್ರಸ್ತುತ ಕಾರ್ಯಕ್ರಮದಲ್ಲಿ ಉಳ್ಳಾಲ ಸೆಕ್ಟರ್ ಅಧ್ಯಕ್ಷ ಸಯ್ಯಿದ್ ಖುಬೈಬ್ ತಂಗಳ್, ಎಸ್ ವೈ ಎಸ್ ಉಳ್ಳಾಲ ಸೆಂಟರ್ ಉಪಾಧ್ಯಕ್ಷ ತ್ವಾಹಿರ್ ಹಾಜಿ, ಎಸ್ ವೈ ಎಸ್ ಉಳ್ಳಾಲ ಸೆಂಟರ್ ಪ್ರಧಾನ ಕಾರ್ಯದರ್ಶಿ ಹನೀಫ್ ಹಾಜಿ ಹಾಗು ಮತ್ತಿತ್ತರರು ಉಪಸ್ಥಿತರಿದ್ದರು.
Sunday, 1 October 2017
ಎಸ್ ವೈ ಎಸ್ ಮುಕ್ಕಚ್ಚೇರಿ ಬ್ರಾಂಚ್ ಹಾಗು ಎಸ್ಸೆಸ್ಸೆಫ್ ಮುಕ್ಕಚ್ಚೇರಿ ಶಾಖಾ ಆಶ್ರಯದಲ್ಲಿ ತಾಜುಲ್ ಉಲಮಾ ಸ್ಟಡೀ ಮತ್ತು ರಿಸರ್ಚ್ ಸೆಂಟರ್ ಕಟ್ಟಡ ಉದ್ಘಾಟನಾ ಸಮಾರಂಭ ಹಾಗು ಮೆಹಪಿಲೇ ತ್ವಯ್ಬಃ ದ್ಸಿಕ್ರ್ ಮಜ್ಲಿಸ್ ಚಾಲನಾ ಸಂಗಮ
Subscribe to:
Post Comments (Atom)
No comments:
Post a Comment