ಜನರು ಪರಸ್ಪರ ಉನ್ನತವಾದ ಮಾನವೀಯ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿ ಪರಸ್ಪರ ಪ್ರೀತಿ ವಿಶ್ವಾಸದಿಂದ ಬಾಳಿ ಬದುಕಿದರೆ ಮಾತ್ರ ಇಲ್ಲಿ ಶಾಂತಿ ಸೌಹಾರ್ದತೆಯಿಂದ ಕೂಡಿದ ಉತ್ತಮ ವಾತಾವರಣ ಸ್ರಷ್ಟಿಸಬಹುದು ಎಂದು ಸಯ್ಯಿದ್ ಮದನಿ ಮೊಹಲ್ಲಾ ಒಕ್ಕೂಟ ಉಳ್ಳಾಲ ಇದರ ಅಧ್ಯಕ್ಷರಾಗಿರುವ ಪಿ ಎಸ್ ಎಂ ಶಿಹಾಬುದ್ದೀನ್ ಸಖಾಫಿ ಉಳ್ಳಾಲ ತಿಳಿಸಿದರು. ಅವರು ಉಳ್ಳಾಲ ಅಕ್ಕರೆಕೆರೆಯ ಎಸ್ಸೆಸ್ಸೆಫ್, ಎಸ್ ವೈ ಎಸ್, ಎಸ್ ಬಿ ಎಸ್ ನ ನವೀಕ್ರತ ಕಛೇರಿ ಉದ್ಘಾಟನಾ ಸಮಾರಂಭ ಹಾಗು ಸ್ನೇಹ ಸಭೆ ಕಾರ್ಯಕ್ರಮದಲ್ಲಿ ಮುಖ್ಯ ಪ್ರಭಾಷಣ ನಡೆಸಿದರು. ಎಸ್ ವೈ ಎಸ್ ಉಳ್ಳಾಲ ಸೆಂಟರ್ ಅಧ್ಯಕ್ಷರಾಗಿರುವ ಸಯ್ಯಿದ್ ಜಲಾಲ್ ತಂಗಳ್ ನವೀಕ್ರತ ಕಛೇರಿ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ಸೆಸ್ಸೆಫ್ ಅಕ್ಕರೆಕೆರೆ ಶಾಖಾಧ್ಯಕ್ಷರಾದ ಶಾಹುಲ್ ಹಮೀದ್ ಜೌಹರಿ ವಹಿಸಿದ್ದರು. ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಅಧ್ಯಕ್ಷರಾದ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಉಳ್ಳಾಲ ಸ್ನೇಹ ಸಭೆಯನ್ನು ಉದ್ಘಾಟಿಸಿ ಮಾತನಾಡಿ ಇಂದು ಎಳೆಯ ವಯಸ್ಸಿನ ಬಾಲಕರು, ಯುವಕರು ಮಾದಕ ಚಟಗಳ ದಾಸರಾಗಿ ತಮ್ಮ ಅಮೂಲ್ಯವಾದ ಜೀವನವನ್ನು ಸ್ವತಃ ನಷ್ಟಪಡಿಸುವುದರೊಂದಿಗೆ ಇತರರ ಪ್ರಾಣಕ್ಕೂ ಕಂಟಕವಾಗಿರುವುದು ಬಹಳ ಖೇದಕರವಾಗಿದೆ. ಇವರು ದುಷ್ಕ್ರತ್ಯಗಳಲ್ಲಿ ಭಾಗಿಯಾಗಲು ಪ್ರೇರಣೆಯಾಗಿರುವ ಜಾಲ ಇಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದೆ. ಅವರನ್ನು ಮಟ್ಟ ಹಾಕುವ ಕೆಲಸವನ್ನು ಇಲ್ಲಿನ ಕಾನೂನು ಪಾಲಕರು ಮೊದಲು ಕೈಗೊಳ್ಳಬೇಕು. ಮಾತ್ರವಲ್ಲ ಗಾಂಜಾ, ಮದ್ಯ ಮುಂತಾದ ಮಾದಕ ಚಟಗಳ ದಾಸರಾದವರನ್ನು ಅದರಿಂದ ಮುಕ್ತಿಗೊಳಿಸುವ ಸಲುವಾಗಿ ಜಾಗ್ರತಿ ಶಿಬಿರಗಳನ್ನು ಆಯಾಯ ಊರಿನಲ್ಲಿ ಏರ್ಪಡಿಸಬೇಕು ಎಂದು ತಿಳಿಸಿದರು.
ಸಯ್ಯಿದ್ ಮದನಿ ಸುನ್ಬೀ ಸೆಂಟ್ರಲ್ ಕಮಿಟಿ ಉಳ್ಳಾಲ ಇದರ ಅಧ್ಯಕ್ಷರಾಗಿರುವ ಅಬೂ ಅನಸ್ ಜಮಾಲ್ ಉಸ್ತಾದ್ ನಮ್ಮಿಂದ ಅಗಲಿದ ಸುನ್ನೀ ಪ್ರಸ್ಥಾನದ ನೇತಾರರು, ಕಾರ್ಯಕರ್ತರು ಹಾಗು ಸಂಘಟನಾ ಪ್ರವರ್ತಕರ ಕುಟುಂಬದಿಂದ ಅಗಲಿದವರ ಮೇಲೆ ತಹ್ಲೀಲ್ ದುಆ ಸಂಗಮಕ್ಕೆ ನೇತ್ರತ್ವ ನೀಡಿದರು. ಬಳಿಕ ಹಾಫಿಝ್ ಉವೈಸ್ ಕೋಟೆಪುರ & ಹಾಶಿರ್ ಕೋಡಿ ಬಳಗದಿಂದ ಬುರ್ದಾ ಆಲಾಪನೆ ಕಾರ್ಯಕ್ರಮ ನಡೆಯಿತು.
ಎಸ್ ವೈ ಎಸ್ ಉಳ್ಳಾಲ ಸೆಂಟರ್ ಮಾಧ್ಯಮ ಕಾರ್ಯದರ್ಶಿ ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ, ಎಸ್ ವೈ ಎಸ್ ಕೋಡಿ ಕೋಟೆಪುರ ಬ್ರಾಂಚ್ ಅಧ್ಯಕ್ಷರಾದ ಅಬ್ದುಲ್ ಹಮೀದ್ ಮುಸ್ಲಿಯಾರ್ ಕೋಡಿ, ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಅಧ್ಯಕ್ಷರಾದ ಸಯ್ಯಿದ್ ಖುಬೈಬ್ ತಂಗಳ್, ಎಸ್ ವೈ ಎಸ್ ಉಳ್ಳಾಲ ಸೆಂಟರ್ ಕೋಶಾಧಿಕಾರಿ ಇಸಾಕ್ ಬಸ್ತಿಪಡ್ಪು, ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಮುಝಮ್ಮಿಲ್ ಕೋಟೆಪುರ, ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಪ್ರಧಾನ ಕಾರ್ಯದರ್ಶಿ ಶರೀಫ್ ಮುಡಿಪು, ಎಸ್ಸೆಸ್ಸೆಫ್ ತೊಕ್ಕೋಟು ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಜಾಫರ್ ತೊಕ್ಕೋಟು, ಎಸ್ ವೈ ಎಸ್ ಅಕ್ಕರೆಕೆರೆ ಹಳೆಕೋಟೆ ಬ್ರಾಂಚ್ ಅಧ್ಯಕ್ಷರಾದ ಸಮದ್ ಹಳೆಕೋಟೆ, ಅಮೀನುದ್ದೀನ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಜೆಡಿಎಸ್ ಮೋನು ಹಾಗು ಎಸ್ ಎಂ ಓ ಹಳೆಕೋಟೆ ಸಮಿತಿ ಸದಸ್ಯ ಸತ್ತಾರ್ ಹಳೆಕೋಟೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಎಸ್ ವೈ ಎಸ್ ಅಕ್ಕರೆಕೆರೆ ಬ್ರಾಂಚ್ ಮಾಜಿ ಅಧ್ಯಕ್ಷ ಉಸ್ಮಾನ್ ಸಖಾಫಿ ಪೊಳಲಿ ಹಾಗು ಎಸ್ ವೈ ಎಸ್ ಅಕ್ಕರೆಕೆರೆ ಹಳೆಕೋಟೆ ಬ್ರಾಂಚ್ ಉಪಾಧ್ಯಕ್ಷರಾದ ಖಾಲಿದ್ ಪಟೇಲ್ ಕಂಪೌಂಡ್ ಕಾರ್ಯಕ್ರಮಕ್ಕೆ ಸಹಕಾರ ನೀಡಿದರು. ಎಸ್ಸೆಸ್ಸೆಫ್ ಅಕ್ಕರೆಕೆರೆ ಶಾಖಾ ಪ್ರಧಾನ ಕಾರ್ಯದರ್ಶಿ ಜಿಶಾನ್ ಸ್ವಾಗತಿಸಿದರು. ಎಸ್ ಬಿ ಎಸ್ ಅಕ್ಕರೆಕೆರೆ ಸಂಚಾಲಕ ಇರ್ಫಾನ್ ನಿರೂಪಿಸಿದರು. ಎಸ್ಸೆಸ್ಸೆಫ್ ಅಕ್ಕರೆಕೆರೆ ಶಾಖಾ ಕೋಶಾಧಿಕಾರಿ ಸಿರಾಜ್ ಅಕ್ಕರೆಕೆರೆ ಧನ್ಯವಾದ ಮಾಡಿದರು.
Sunday, 22 October 2017
ಅಕ್ಕರೆಕೆರೆಯ ಎಸ್ಸೆಸ್ಸೆಫ್, ಎಸ್ ವೈ ಎಸ್, ಎಸ್ ಬಿ ಎಸ್ ನ ನವೀಕ್ರತ ಕಛೇರಿ ಉದ್ಘಾಟನಾ ಸಮಾರಂಭ ಹಾಗು ಸ್ನೇಹ ಸಭೆ ಕಾರ್ಯಕ್ರಮ
Subscribe to:
Post Comments (Atom)
No comments:
Post a Comment