ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಕ್ಯಾಂಪಸ್ ಸಮಿತಿಯ ಆಶ್ರಯದಲ್ಲಿ ಗೆಟ್ ಟುಗೆದರ್ ಸಂಗಮ ಕ್ಯಾಂಪಸ್ ಚೇರಮಾನ್ ಮುಹಮ್ಮದ್ ಮದನಿ ಹಳೆಕೋಟೆ ಇವರ ಅಧ್ಯಕ್ಷತೆಯಲ್ಲಿ ಹಳೆಕೋಟೆಯ ಎಸ್ಸೆಸ್ಸೆಫ್ ಸ್ಟೂಡೆಂಟ್ಸ್ ಹೌಸ್ ನಲ್ಲಿ ಇತ್ತೀಚೆಗೆ ಜರುಗಿತು.
ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಅಧ್ಯಕ್ಷರಾದ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಉಳ್ಳಾಲ ದುವಾ ನೆರವೇರಿಸಿದರು. ಎಸ್ಸೆಸ್ಸೆಫ್ ಕೋಟೆಪುರ ಶಾಖಾ ಪ್ರಧಾನ ಕಾರ್ಯದರ್ಶಿ ನೌಫಲ್ ಕೋಟೆಪುರ ಕಿರಾಅತ್ ಪಡಿಸಿದರು. ಸೆಕ್ಟರ್ ಅಧ್ಯಕ್ಷರಾದ ಸಯ್ಯಿದ್ ಖುಬೈಬ್ ತಂಗಳ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಸ್ಸೆಸ್ಸೆಫ್ ದ.ಕ ಜಿಲ್ಲಾ ಕ್ಯಾಂಪಸ್ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ವಿಷಯ ಮಂಡನೆ ಮಾಡಿದರು. ಎಸ್ಸೆಸ್ಸೆಫ್ ಮೇಲಂಗಡಿ ಶಾಖಾಧ್ಯಕ್ಷ ಅಬೂ ಅನಸ್ ಜಮಾಲ್ ಉಸ್ತಾದ್ ಆತ್ಮೀಯ ತರಗತಿ ನಡೆಸಿದರು. ಮುನೀರ್ ಕಾಮಿಲ್ ಸಖಾಫಿ ಹಾಗು ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಮುಝಮ್ಮಿಲ್ ಕೋಟೆಪುರ ಆಶಂಶಾ ಭಾಷಣ ಮಾಡಿದರು.
ಈ ಸಂದರ್ಭದಲ್ಲಿ ಸೆಕ್ಟರ್ ಉಪಾಧ್ಯಕ್ಷ ಮಿಕ್ದಾದ್ ಮುಕ್ಕಚ್ಚೇರಿ, ಕೋಶಾಧಿಕಾರಿ ಶಬೀರ್ ಪೇಟೆ, ಎಸ್ಸೆಸ್ಸೆಫ್ ಮುಕ್ಕಚ್ಚೇರಿ ಶಾಖಾಧ್ಯಕ್ಷ ಅಹ್ಸನ್, ಮೇಲಂಗಡಿ ಶಾಖಾ ಪ್ರಧಾನ ಕಾರ್ಯದರ್ಶಿ ತಶ್ರೀಫ್ ಮೇಲಂಗಡಿ, ಮೇಲಂಗಡಿ ಶಾಖಾ ಜತೆ ಕಾರ್ಯದರ್ಶಿ ಶಫೀಕ್ ಮೇಲಂಗಡಿ, ಎಸ್ಸೆಸ್ಸೆಫ್ ಕೋಟೆಪುರ ಶಾಖಾಧ್ಯಕ್ಷ ಮುಝಮ್ಮಿಲ್ ಉಸ್ತಾದ್, ಎಸ್ ಬಿ ಎಸ್ ಉಳ್ಳಾಲ ಸಂಚಾಲಕ ಮುಹಾಝ್ ಬಂಡಿಕೊಟ್ಯ, ಒಂಭತ್ತುಕೆರೆ ಶಾಖಾ ಪ್ರಧಾನ ಕಾರ್ಯದರ್ಶಿ ನಿಝಾಮ್ ಒಂಭತ್ತುಕೆರೆ ಹಾಗು ಉಳ್ಳಾಲಬೈಲು ಶಾಖಾ ಜತೆ ಕಾರ್ಯದರ್ಶಿ ಅರಾಫತ್ ಉಳ್ಳಾಲಬೈಲು ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ತ್ವಾಹಾ ಕೋಟೆಪುರ ಹಾಗು ಹಮೀದ್ ಹಳೆಕೋಟೆ ಸಹಕರಿಸಿದರು. ಕ್ಯಾಂಪಸ್ ಉಳ್ಳಾಲ ಸೆಕ್ಟರ್ ಕನ್ವೀನರ್ ಫಾಳಿಲ್ ಮೇಲಂಗಡಿ ಸ್ವಾಗತಿಸಿದರು. ಕೋಡಿ ಶಾಖಾ ಪ್ರಧಾನ ಕಾರ್ಯದರ್ಶಿ ಹಫೀಝ್ ಕೋಡಿ ಕಾರ್ಯಕ್ರಮ ನಿರೂಪಿಸಿದರು. ಸೆಕ್ಟರ್ ಜೊತೆ ಕಾರ್ಯದರ್ಶಿ ಹಪೀಝ್ ಬೊಟ್ಟು ಧನ್ಯವಾದಗೈದರು.
Sunday, 9 April 2017
ಕ್ಯಾಂಪಸ್ ಉಳ್ಳಾಲ ಸೆಕ್ಟರ್ : ಗೆಟ್ ಟುಗೆದರ್ ಸಂಗಮ
Labels:
ಗೆಟ್ ಟುಗೆದರ್ ಸಂಗಮ
Subscribe to:
Post Comments (Atom)
Mashallha allahu ಸ್ವೀಕರಿಸಲಿ
ReplyDeleteMashallha allahu ಸ್ವೀಕರಿಸಲಿ
ReplyDelete